ರಸ್ತೆ ಕಾಮಗಾರಿಗೆ ಸಂಬಂಧಪಟ್ಟ ಗಲಾಟೆಯಲ್ಲಿ ಅಜ್ಜಿಯೊಬ್ಬರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ತೊಡೆ ತಟ್ಟಿದ ಘಟನೆ ನಡೆದಿದೆ. ಆನೇಕಲ್ ತಾಲ್ಲೂಕಿನ ನೆರಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಇಚ್ಚಂಗೂರಿನಲ್ಲಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ರಸ್ತೆ ಕಾಮಗಾರಿ ಮಾಡಲು ಹೊರಟಿರುವ ಜಾಗದಲ್ಲಿ ಖಾಸಗಿ ಜಮೀನು ಇದೇ ಎಂದು ಗಲಾಟೆ ಶುರುವಾಗಿದೆ. ನಮ್ಮ ಜಮೀನಿನ ಮೇಲೆ ರಸ್ತೆ ಮಾಡಬಾರದು ಎಂದು ವೃದ್ಧ ದಂಪತಿ ಒತ್ತಾಯಿಸಿದ್ದಾರೆ. ಸಮಸ್ಯೆ ಇತ್ಯರ್ಥ ಮಾಡಿ ಗುದ್ದಲಿ ಪೂಜೆ ನಡೆಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖಂಡರಿಗೂ ವೃದ್ಧ ದಂಪತಿಗೂ ಮಾತಿಗೆ ಮಾತು ಬೆಳೆದಿದೆ. ನಂತರ ಯಾವುದೇ ಕಾರಣಕ್ಕೂ ನಮ್ಮ ಜಮೀನನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ವೃದ್ಧೆ ತೊಡೆ ತಟ್ಟಿ ಸವಾಲ್ ಹಾಕಿರುವ ವಿಡಿಯೋ ಈಗ ವೈರಲ್ ಆಗಿದೆ.
VIJAYAVANI,KANNADA DAILY,KARNATAKA NEWS,KANNADA NEWS
VIJAYAVANIKANNADA DAILYKARNATAKA NEWS
0 Comments